WELCOME TO MY BLOG ......THANK YOU ALL
WELCOME TO OUR SCHOOL BLOG .......GIVE YOUR VALUABLE SUGGESIONS TO IMPROVE OUR BLOG
OUR BLOG STILL UNDER CONSTRUCTION... SOME LINKS NOT FILLED
WE WILL ADD ALL THE INFORMATION VERY SOON

Thursday, August 6, 2020

ಆಗಸ್ಟ್ ಮೊದಲವಾರ ಬಂದ ನೂತನ ಆದೇಶ. pdf preview testing page

 *ಮಾನ್ಯ ಶಿಕ್ಷಣ ಸಚಿವರು ಹಾಗೂ ಆಯುಕ್ತರು ಮತ್ತು SPD ಯವರು ವಿಡಿಯೋ ಕಾನ್ಫರೆನ್ಸ್ ನಲ್ಲಿ ತಿಳಿಸಿದಂತೆ*

ಕಾಲ್ಪನಿಕ ಕಲಿಕಾ ಕೋಣೆಯ ಡ್ರಾಫ್ಟನಲ್ಲಿಯ *ಇಂಟೆಲಿಜೆನ್ಸ್, ಬ್ರಿಲ್ಲಯೆಂಟ್,ಜೀನಿಯಸ್* ಹೆಸರುಗಳನ್ನು ಕೈ ಬಿಡುವದು.

ಮಾರ್ಗದರ್ಶಿ ಶಿಕ್ಷಕರಿಗೆ ಹಂಚಿಕೆ ಮಾಡಿದ 20-25 ಮಕ್ಕಳನ್ನು ಒಂದೇ ಕಡೆ ಸೇರಿಸಿ ಕಪ್ಪು ಹಲಗೆ ಬಳಸಿ ಔಪಚಾರಿಕ ಶಿಕ್ಷಣದಂತೆ ಪಾಠವನ್ನು ಮಾಡದೇ ಮಕ್ಕಳಿಗೆ ನೆರೆಹೊರೆಗೆ ಗರಿಷ್ಠ 4 ರಿಂದ 5 ಮಕ್ಕಳು ಇದ್ದಲ್ಲಿ ಶಿಕ್ಷಕರೇ ಹೋಗಿ  ಕಲಿಕಾ ಸಾಮಗ್ರಿಗಳನ್ನು ನೀಡಿ ಸ್ವಯಂ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು,

ಹಾಗೆಯೇ ಮತ್ತೆ 4-5 ಮಕ್ಕಳಿದ್ದಲ್ಲಿ ಹೋಗಿ ಮಾರ್ಗದರ್ಶನ ಮಾಡಬೇಕು. ಹೀಗೆಯೇ 4 ರಿಂದ 5 ಕಡೆಗೆ ಹೋಗಿ ಮಕ್ಕಳಿಗೆ  *ತರಗತಿವಾರು ವಿಷಯವಾರು ಚಟುವಟಿಕೆಗಳನ್ನು ನೀಡಬೇಕು.*

ಮುಂದಿನ ವಾರ *ಹಿಂದಿನ ಚಟುವಟಿಕೆಗಳನ್ನು ವೀಕ್ಷಿಸಿ ಮಾರ್ಗದರ್ಶನ ನೀಡಿ ಪ್ರಸ್ತುತ ವಾರದ ಚಟುವಟಿಕೆಗಳನ್ನು ನೀಡಬೇಕು.*

10/8/2020 ರಿಂದ 15/8/2020 ರ ವರೆಗೆ *ದಾಖಲಾತಿ ಆಂದೋಲನ* ಮಾಡಬೇಕು,

ಮಾರ್ಗದರ್ಶಿ ಶಿಕ್ಷಕರು ತಮ್ಮ ವಲಯದಲ್ಲಿನ ಎಲ್ಲ ಅರ್ಹ ಮಕ್ಕಳನ್ನು  1 ನೇ ತರಗತಿಗೆ 6,8,9 ನೇ ತರಗತಿಗೆ ವಲಸೆ ಮಕ್ಕಳನ್ನೂ ಸೇರಿಸಿ 100% ದಾಖಲೆಯನ್ನು ಮಾಡಿಕೊಳ್ಳಬೇಕು.

ಮುಖ್ಯ ಶಿಕ್ಷಕರು ಮಾರ್ಗದರ್ಶಿ ಶಿಕ್ಷಕರಿಗೆ ಈ ಕುರಿತು ಬೇಕಾದ ಸಪೋರ್ಟ್, ಅನುಕೂಲತೆಗಳನ್ನು ಕೊಡಬೇಕು. *ವಲಸೆ ಬಂದ ಮಕ್ಕಳನ್ನು ಹಾಗೂ ವಸತಿ ಶಾಲೆ ಮಕ್ಕಳು* ಮಾರ್ಗದರ್ಶಿ ಶಿಕ್ಷಕರ ವ್ಯಾಪ್ತಿಗೆ ಬಂದಲ್ಲಿ ಅವರನ್ನೂ ಗುಂಪಿಗೆ ಸೇರಿಸಿಕೊಳ್ಳಬೇಕು.

ವಲಸೆ ಮಕ್ಕಳ ಪಾಲಕರ ಇಚ್ಛೆಯಂತೆ ದಾಖಲೆಗಳನ್ನು ಕೇಳದೇ ಅವರ ಹೇಳಿಕೆಯ ಮೇರೆಗೆ ಸಂಬಂಧಿಸಿದ ತರಗತಿಗೆ ದಾಖಲಿಸಿಕೊಳ್ಳಬೇಕು.

ಕಲಿಕಾ ಸಾಮಗ್ರಿಗಳನ್ನು ತಯಾರಿಸಲು ಮುಖ್ಯ ಶಿಕ್ಷಕರು ಸಂಚಿತ ನಿಧಿಯಿಂದ ಹಣಕಾಸು ನೆರವನ್ನು ನೀಡಬೇಕು.

ಶಾಲೆಗಳಲ್ಲಿ ಯಾವುದೇ ಕಾರಣಕ್ಕೂ ವಿದ್ಯಾಗಮ ತರಗತಿ ನಡೆಸಕೂಡದು.

ಒಂದು ವೇಳೆ ನಡೆಸಿದಲ್ಲಿ ತಮ್ಮ ವಿದ್ಯಾಗಮ ಯೋಜನೆ ನಿಯಮಗಳ ಉಲ್ಲಂಘನೆಯಾಗುತ್ತದೆ.

20/8/2020 ರಿಂದ 5/9/2020 ರವರೆಗೆ           1 ರಿಂದ 7 ನೇ ತರಗತಿಗೆ *ಸೇತುಬಂಧ ಕಾರ್ಯಕ್ರಮ* ನಡೆಸಬೇಕು.

*ಸಂವೇದ ಕಾರ್ಯಕ್ರಮಕ್ಕೆ TV ಲಭ್ಯವಿರುವ, ಲಭ್ಯವಿರದ ಮಕ್ಕಳ ಮಾಹಿತಿ ತಯಾರಿಸಿ*

*TV ಲಭ್ಯವಿರುವ ಮಕ್ಕಳೊಂದಿಗೆ TV   ಲಭ್ಯವಿರದ ಮಕ್ಕಳನ್ನು ಟ್ಯಾಗ್* ಮಾಡಬೇಕು.

ಇದು ಆಗದಿದ್ದರೆ ಪಂಚಾಯತ್ ನಿಂದ ಅಥವಾ ದಾನಿಗಳ ನೆರವಿನಿಂದ T.V ಸಂಗ್ರಹಿಸಿ ಹಾಲ್ ನಲ್ಲಿ ವ್ಯವಸ್ಥೆ ಮಾಡಿಕೊಡಬೇಕು. 

ಇಷ್ಟು ಮಾಡಿಯೂ T.V ಒದಗಿಸಲಾಗದಿದ್ದಲ್ಲಿ ಮಾತ್ರ ಮಾಹಿತಿಯನ್ನು CRP ಗಳ ಮೂಲಕ BRC ಗೆ ನೀಡಬೇಕು.

ವಿದ್ಯಾಗಮದ ಉದ್ದೇಶ ಸಿಲೆಬಸ್ ಮುಗಿಸುವುದಲ್ಲ. *ಕೊರೊನಾದ ಉಪಟಳ ಕಡಿಮೆ ಆಗದಿದ್ದಲ್ಲಿ ಸೆಪ್ಟೆಂಬರ್ ನಿಂದ  T.V ಮೂಲಕ ಪಾಠ ಆರಂಭಿಸಲು ಚಿಂತನೆ ನಡೆದಿದೆ.*

ಅಂತಿಮ ಪರೀಕ್ಷೆಗಳು BASED ON LEARNING COMPETENCY. TEXT BOOK CHAPTERS BASED ON LEARNING competencies ಎಂಬುದನ್ನು ಎಲ್ಲಾ ಶಿಕ್ಷಕರು ಮನಗಾಣಬೇಕು.

ಮಕ್ಕಳ ಶಿಕ್ಷಕರ ಅನುಪಾತದನ್ವಯ ಶಿಕ್ಷಕರ ಕೊರತೆ ಇದ್ದಲ್ಲಿ ಮಾತ್ರ ಅಂದರೆ ZERO TEACHERS ಸ್ಕೂಲ್ ಗಳಿಗೆ ಪ್ರಥಮ ಆದ್ಯತೆ ನೀಡುತ್ತಾ ಅತಿಥಿ ಶಿಕ್ಷಕರನ್ನು ಕೊಡಲು ಚಿಂತನೆ ನಡೆದಿದೆ.

ಹಿರಿಯ ವಿದ್ಯಾರ್ಥಿಗಳ TEXT BOOK ಪಡೆದು BOOK BANK ಮಾಡಬೇಕು.

ಆ ಪುಸ್ತಕಗಳು ವಿದ್ಯಾರ್ಥಿಗಳಿಗೆ ಲಭ್ಯ ಆಗುವಂತೆ ಶಾಲೆಯ ಮುಖ್ಯ ಶಿಕ್ಷಕರು ಶಿಕ್ಷಕರು ಕ್ರಮ ವಹಿಸಬೇಕು.

CLASS ROOMS ಓಪನ್ ಮಾಡಬಹುದೋ ಎಂಬುದಕ್ಕೆ MHRD ಯ ಸಲಹೆಯನ್ನು ನಿರೀಕ್ಷೆ ಮಾಡಲಾಗುತ್ತಿದೆ.

ಇಲಾಖೆಯ ಪಕ್ಕಾ ಸೂಚನೆಗೂ ಮೊದಲು ವಿದ್ಯಾಗಮ ಜಾರಿ ಮಾಡಿದ ಶಿಕ್ಷಕರ ಕುರಿತು ಕಮಿಷನರ್ ಸಂತಸ ವ್ಯಕ್ತಪಡಿಸಿದರು.

ವಿದ್ಯಾಗಮ  ಚಟುವಟಿಕೆ ನಿರತ ಶಿಕ್ಷಕರಿಗೆ ಮಾತ್ರ ಅಲ್ಲ, ರಾಜ್ಯದ ಎಲ್ಲಾ ಶಾಲೆಗಳ ಎಲ್ಲಾ ಶಿಕ್ಷಕರಿಗೂ ಕಡ್ಡಾಯ ಎಂಬುದನ್ನು ದೃಢವಾಗಿ ಹೇಳಿದರು.  

*ಸಮನ್ವಯಾಧಿಕಾರಿ*

No comments:

Post a Comment